HALE BAATLI HOSA WINEU

BYAATEMARA
ಹೊಸ ವರ್ಷದ ಮೊದಲ ಕಾರ್ಯಕ್ರಮ @someyathi ಯಲ್ಲಿ ಯಶಸ್ವಿಯಾಗಿ ನಡೆಯಿತು. ಬರಹಗಾರರೊಂದಿಗೆ ಬೆರೆತು, ಸಂವಾದ ಮಾಡುವ ಮೂಲಕ ಸಾಹಿತ್ಯದ ಮೊದಲ ಸಿಟ್ಟಿಂಗ್ ಹಿಟ್ ಆಯ್ತು! ಹೊಸ ಪ್ರಯತ್ನಕ್ಕೆ ಸಾಕ್ಷಿಯಾಗಿ, ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ @baa_guru_book_tago @_itihasa_ @someyathi ತಂಡಗಳ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು. ಸಂವಾದವನ್ನ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ @sandhyarani_n ಮೇಡಂಗೆ ವಂದನೆಗಳು. 'ಬ್ಯಾಟೆಮರ'ದ ಲೇಖಕ @filmy_freaky ಹಾಗು 'ಕಾಜೂ ಬಿಸ್ಕೆಟ್'ನ ಲೇಖಕ @kiran.kumar.kr ಅವರವರ ದೃಷ್ಟಿಕೋನವನ್ನು ಮನಸು ಬಿಚ್ಚಿ ಪ್ರೇಕ್ಷಕರೊಂದಿಗೆ ಹಂಚಿಕೊಂಡರು. ಮುಂದಿನ ಸಂಚಿಕೆಗೆ ಎದುರು ನೋಡುತ್ತಾ ಎಂದಿನಂತೆ ನಿಮ್ಮ ಬೆಂಬಲ ಬಯಸ್ತುತ್ತೇವೆ. ಮತ್ತೊಮ್ಮೆ ಸಿಟ್ಟಿಂಗ್ ಹಾಕೋಣ, ಕತೆಗಾರರೊಂದಿಗೆ ಕಾಲ ಕಳೆಯೋಣ!

HELLO KATHEGAARTI
ಮಹಿಳಾ ದಿನದ ವಿಶೇಷದ ಬೆರಗಿಗೆ ನಮ್ಮ ಎರಡನೇ ಸಂಚಿಕೆ “ಹಲೋ ಕತೆಗಾರ್ತಿ” ಗೆ ದಯಾ ಗಂಗನಘಟ್ಟ ಹಾಗೂ ಅರ್ಪಣಾ ಎಚ್ ಎಸ್ @arpananataraj ಇಬ್ಬರು ಕತೆಗಾರ್ತಿಯರು ಜೊತೆಯಾಗಿದ್ದರು.
ಸಂವಾದವನ್ನ ಶ್ರೀ. ಜಿ.ಎನ್. ಮೋಹನ್ @gnmohann ನಡೆಸಿಕೊಟ್ಟಿರುವುದು ಮತ್ತೊಂದು ವಿಶೇಷ.
ಬಾ ಗುರು ಬುಕ್ ತಗೋ, ಇತಿಹಾಸ, ಸಂಯತಿ ತಂಡದ ಸಹಯೋಗದ ಈ ಎರಡನೇ ಸಂಚಿಕೆ “ಸಿವಗಂಗ ಟ್ರಸ್ಟ್” ಸಹಕಾರದಲ್ಲಿ ನಡೆಯಿತು.

KAVIGALIGE CLASSU
ಸಂಚಿಕೆ ಮೂರು - ಕವಿಗಳಿಗೆ ಕ್ಲಾಸು.
ಸ್ವಲ್ಪ ಧಗೆಯ ದಣಿವು ಬಿಟ್ರೆ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದು ಕವಿಗಳ ಓದು, ತುಂಬ ಪ್ರಮುಖ ಪ್ರಶ್ನೆಗಳ ಮೂಲಕ ಆದ ಸಂವಾದ, ಕಮಲಾ ಮೇಡಂ ಮತ್ತು ಚಾಂದ್ ಎನ್ ಪಾಷಾರ ಗುರು ಶಿಷ್ಯರ ಚೈತನ್ಯಶೀಲ ಮಾತು.
ನಮ್ಮ ಜೊತೆಯಾದ ಕಮಲಾ ಮೇಡಂ, ವಿದ್ಯಾರಶ್ಮಿ ಮೇಡಂ, ನಾಗಶ್ರೀ ಅಜಯ್ ಮೇಡಂ, ಲಕ್ಷ್ಮಣ್ ವಿ ಎ ಸರ್ ಮತ್ತು ಬರ್ತಡೇ ಬಾಯ್ ಮತ್ತು ಭಾಯಿ ಜಾನ್ ಚಾಂದ್ ಎನ್ ಪಾಷರಿಗೂ ಥ್ಯಾಂಕ್ಯೂ.
ಇಂತಹ ಪ್ರಯೋಗಕ್ಕೆ ಬಂದ ಎಲ್ಲ ಸಹೃದಯರಿಗೂ ಥ್ಯಾಂಕ್ಯೂ